ಖರೀದಿದಾರರಿಗೆ ನಿಮ್ಮ ಅಂಗಡಿ ಮತ್ತು ಅದರ ಉತ್ಪನ್ನಗಳು ಕಾಣುತ್ತವೆ. ಪಾರ್ಸೆಲ್ ಕಳುಹಿಸಲು ಬೇಕಾದ ಕಡೆ ಮಾತ್ರ ನಿಮಗೆ ಖರೀದಿದಾರರ ವಿವರಗಳು ಕಾಣುತ್ತವೆ. ಈ ಪುಟ ಎರಡೂ ಕಡೆಯ ವಿವರಗಳನ್ನು ಪಟ್ಟಿ ಮಾಡುತ್ತದೆ.
ನಿಮ್ಮ ಬಗ್ಗೆ ಖರೀದಿದಾರರಿಗೆ ಏನು ಕಾಣುತ್ತದೆ
- ನಿಮ್ಮ ಅಂಗಡಿಯ ಹೆಸರು, ಬ್ಯಾನರ್ ಮತ್ತು What you sell (ನೀವು ಮಾರುವುದು).
- ನೀವು ಬರೆದಿದ್ದರೆ, ನಿಮ್ಮ About (ಅಂಗಡಿಯ ಬಗ್ಗೆ) ಸಾಲು.
- Run by (ನಡೆಸುವವರು) ಎಂಬುದರ ಕೆಳಗೆ, ನಿಮ್ಮ Sagazo ಪ್ರೊಫೈಲ್ನಲ್ಲಿರುವ ಹೆಸರು. ಅದನ್ನು ಒತ್ತಿದರೆ ನಿಮ್ಮ ಪ್ರೊಫೈಲ್ ಪುಟ ತೆರೆಯುತ್ತದೆ.
- ಅಂಗಡಿ ಪರಿಶೀಲನೆ ಆಗಿದೆಯೇ ಎಂಬುದು, ಮತ್ತು ಅದನ್ನು ಎಷ್ಟು ಜನ ಫಾಲೋ ಮಾಡುತ್ತಾರೆ ಎಂಬುದು.
- ಪ್ರತಿ ಉತ್ಪನ್ನ, ಅದರ ಫೋಟೋಗಳು, ಬೆಲೆ, ವಿವರಣೆ, ವಿವರಗಳ ಕೋಷ್ಟಕ ಮತ್ತು ತಯಾರಕರ ಅಥವಾ ಪ್ಯಾಕ್ ಮಾಡುವವರ ಸಾಲಿನ ಜೊತೆಗೆ.
- ಅವರು ಆರ್ಡರ್ ಮಾಡಿದ ಮೇಲೆ, ನೀವು ಕೊಟ್ಟ ಕೊರಿಯರ್ ಹೆಸರು ಮತ್ತು ಟ್ರ್ಯಾಕಿಂಗ್ ಸಂಖ್ಯೆ, ಹಾಗೂ ನೀವು ಕಳುಹಿಸುವ ಸಂದೇಶಗಳು.
ನಿಮ್ಮ ಫೋನ್ ಸಂಖ್ಯೆ, ಇಮೇಲ್, ಅಂಗಡಿಯ ವಿಳಾಸ, ಪಿಕಪ್ ವಿಳಾಸ, GST ಸಂಖ್ಯೆಗಳು, ಮಾರಾಟದ ಅಂಕಿಅಂಶಗಳು, ವಿಮರ್ಶೆಗಳು ಮತ್ತು ಗ್ರಾಹಕರ ಪಟ್ಟಿ ಅವರಿಗೆ ಕಾಣುವುದಿಲ್ಲ. ನಿಮ್ಮ ಜೊತೆ ಮಾತನಾಡಲು ಬಯಸುವ ಖರೀದಿದಾರರು, ನಿಮ್ಮ ಅಂಗಡಿಯ ಪುಟದಲ್ಲಿ ಅಥವಾ ತಮ್ಮ ಆರ್ಡರ್ನಲ್ಲಿ ಇರುವ Message (ಸಂದೇಶ) ಒತ್ತುತ್ತಾರೆ.

ಖರೀದಿದಾರರ ಬಗ್ಗೆ ನಿಮಗೆ ಏನು ಕಾಣುತ್ತದೆ
- ಒಂದು ಆರ್ಡರ್ನಲ್ಲಿ ಅವರ ಹೆಸರು, ಡೆಲಿವರಿ ವಿಳಾಸ ಮತ್ತು ಲೇಬಲ್ಗಾಗಿ ಫೋನ್ ಸಂಖ್ಯೆ ನಿಮಗೆ ಕಾಣುತ್ತವೆ.
- ನಿಮ್ಮ Customers (ಗ್ರಾಹಕರು) ಪುಟದಲ್ಲಿ ಅವರ ಹೆಸರು ಕಾಣುತ್ತದೆ. ಅವರು ನಿಮ್ಮಲ್ಲಿ ಎಷ್ಟು ಬಾರಿ ಆರ್ಡರ್ ಮಾಡಿದರು, ಎಷ್ಟು ಖರ್ಚು ಮಾಡಿದರು ಎಂಬುದೂ ಕಾಣುತ್ತದೆ.
- Chat (ಚಾಟ್) ಪುಟದಲ್ಲಿ ಅವರು ನಿಮಗೆ ಬರೆದದ್ದು ಕಾಣುತ್ತದೆ.
- ಡೆಲಿವರಿಯ ನಂತರ, ಅವರು ಕೊಟ್ಟ ರೇಟಿಂಗ್ ಮತ್ತು ಕಾಮೆಂಟ್ ನಿಮ್ಮ Reviews (ವಿಮರ್ಶೆಗಳು) ಪುಟದಲ್ಲಿ ಕಾಣುತ್ತವೆ.
ಅವರ ಬೇರೆ ಆರ್ಡರ್ಗಳು ನಿಮಗೆ ಕಾಣುವುದಿಲ್ಲ. ಅವರು ಆರ್ಡರ್ ಮಾಡುವವರೆಗೆ ಅವರ ವಿಳಾಸವೂ ಕಾಣುವುದಿಲ್ಲ. ನಿಮ್ಮ ಅಂಗಡಿಯ ಜೊತೆಗಿನ ಆರ್ಡರ್ನ ಭಾಗವಲ್ಲದ ಅವರ ಯಾವ ವಿವರವೂ ನಿಮಗೆ ಕಾಣುವುದಿಲ್ಲ.

ಈ ವಿವರಗಳನ್ನು ಏನು ಮಾಡಬೇಕು
ಖರೀದಿದಾರರ ವಿವರಗಳನ್ನು ಅವರ ಪಾರ್ಸೆಲ್ ಕಳುಹಿಸಲು ಮತ್ತು ಆರ್ಡರ್ ಬಗ್ಗೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಬಳಸಿ. ಆ ವಿವರಗಳನ್ನು ವಾಟ್ಸ್ಆ್ಯಪ್ ಬ್ರಾಡ್ಕಾಸ್ಟ್ ಪಟ್ಟಿಗೆ ಸೇರಿಸಬೇಡಿ. ಬೇರೆ ಯಾರಿಗೂ ಕೊಡಬೇಡಿ. ಭಾರತದ ಡೇಟಾ ಸಂರಕ್ಷಣಾ ಕಾನೂನಿನ ಪ್ರಕಾರ, ಇದನ್ನೇ ನಿರೀಕ್ಷಿಸುವ ಹಕ್ಕು ಖರೀದಿದಾರರಿಗೆ ಇದೆ. ನಮ್ಮ ಗೌಪ್ಯತಾ ನೀತಿ ನಮ್ಮ ಪರವಾಗಿ ಮತ್ತು ನಿಮ್ಮ ಪರವಾಗಿಯೂ ಅವರಿಗೆ ಇದರ ಭರವಸೆ ಕೊಡುತ್ತದೆ.