ನೇರವಾಗಿ ಮುಖ್ಯ ಭಾಗಕ್ಕೆ ಹೋಗಿ

ನಿಮ್ಮ ಪ್ರೊಫೈಲ್ ಎಡಿಟ್ ಮಾಡುವುದು ಹೇಗೆ

ಕೊನೆಯ ಅಪ್‌ಡೇಟ್:

ನಿಮ್ಮ ಹೆಸರು, ಪ್ರೊಫೈಲ್ ಫೋಟೋ ಮತ್ತು ಬಳಕೆದಾರ ಹೆಸರನ್ನು ಯಾವಾಗ ಬೇಕಾದರೂ ಬದಲಿಸಬಹುದು. ಪ್ರೊಫೈಲ್‌ಗಳಲ್ಲಿ ಬಯೋ ಆಗಲೀ, ನಿಮ್ಮ ಬಗ್ಗೆ ಬರೆಯುವ ವಿಭಾಗವಾಗಲೀ ಇಲ್ಲ.

ನಿಮ್ಮ ಹೆಸರು

ವೆಬ್‌ಸೈಟ್‌ನಲ್ಲಿ Settings (ಸೆಟ್ಟಿಂಗ್‌ಗಳು) ತೆರೆಯಿರಿ. Account (ಖಾತೆ) ಟ್ಯಾಬ್‌ನಲ್ಲೇ ಇದ್ದು, Display Name (ಕಾಣಿಸುವ ಹೆಸರು) ಪಕ್ಕದ Edit (ಎಡಿಟ್ ಮಾಡಿ) ಒತ್ತಿ. ನಿಮ್ಮ ಪ್ರೊಫೈಲ್ ಪುಟದಲ್ಲಿರುವ Edit name (ಹೆಸರು ಎಡಿಟ್ ಮಾಡಿ) ಕೂಡ ಒತ್ತಬಹುದು. ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್‌ನಲ್ಲಿರುವ Edit profile (ಪ್ರೊಫೈಲ್ ಎಡಿಟ್ ಮಾಡಿ) ಒತ್ತಿ. ಅಥವಾ Settings ತೆರೆದು, Display Name ಒತ್ತಿ.

ಹೆಸರಿನಲ್ಲಿ ಗರಿಷ್ಠ 80 ಅಕ್ಷರಗಳು ಇರಬಹುದು. ಅದರಲ್ಲಿ "Sagazo" ಅಥವಾ "Proper Eleven" ಇರಬಾರದು. ಏಕೆಂದರೆ ಆ ಹೆಸರುಗಳು ನಮ್ಮ ಅಧಿಕೃತ ಖಾತೆಗಳಿಗೆ ಸೇರಿವೆ.

ಬೇರೆಯವರಿಗೆ ನಿಮ್ಮ ಮೊದಲ ಹೆಸರು ಮತ್ತು ಕೊನೆಯ ಹೆಸರಿನ ಮೊದಲ ಅಕ್ಷರ ಕಾಣುತ್ತದೆ, ಉದಾಹರಣೆಗೆ "Asha K.". ನಿಮ್ಮ ಪೂರ್ತಿ ಹೆಸರು ನಿಮಗೆ ಮಾತ್ರ ಕಾಣುತ್ತದೆ.

ನಿಮ್ಮ ಪ್ರೊಫೈಲ್ ಫೋಟೋ

ವೆಬ್‌ಸೈಟ್‌ನಲ್ಲಿ ನಿಮ್ಮ ಪ್ರೊಫೈಲ್ ತೆರೆಯಿರಿ, ನಿಮ್ಮ ಫೋಟೋ ಮೇಲಿರುವ ಕ್ಯಾಮೆರಾ ಐಕಾನ್ ಒತ್ತಿ. ನಂತರ ಒಂದು ಫೋಟೋ ಆರಿಸಿ. ಅಪ್‌ಲೋಡ್ ಆದ ತಕ್ಷಣ Sagazo ಅದನ್ನು ಉಳಿಸುತ್ತದೆ. ಗರಿಷ್ಠ 10 MB ಗಾತ್ರದ JPG, PNG ಅಥವಾ WebP ಫೈಲ್ ಬಳಸಿ.

ಫೋಟೋ ತೆಗೆಯಲು, ನಿಮ್ಮ ಹೆಸರಿನ ಕೆಳಗಿರುವ Remove photo (ಫೋಟೋ ತೆಗೆದುಹಾಕಿ) ಒತ್ತಿ, ಖಚಿತಪಡಿಸಿ. ಆಗ ಆ ಜಾಗದಲ್ಲಿ ಜನರಿಗೆ ನಿಮ್ಮ ಹೆಸರಿನ ಮೊದಲ ಅಕ್ಷರ ಕಾಣುತ್ತದೆ.

ಆ್ಯಪ್‌ನಲ್ಲಿ ನಿಮ್ಮ ಪ್ರೊಫೈಲ್‌ನಲ್ಲಿರುವ Edit profile ಒತ್ತಿ, ನಂತರ Change photo (ಫೋಟೋ ಬದಲಿಸಿ) ಒತ್ತಿ.

ನೀವು ಹಂಚಿಕೊಳ್ಳುವ ಉಳಿದೆಲ್ಲದರಂತೆ, ಪ್ರೊಫೈಲ್ ಫೋಟೋ ಕೂಡ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಪಾಲಿಸಬೇಕು.

ನಿಮ್ಮ ಬಳಕೆದಾರ ಹೆಸರು

@ ಗುರುತಿನ ನಂತರ ಬರುವ ಹೆಸರೇ ನಿಮ್ಮ ಬಳಕೆದಾರ ಹೆಸರು, ಉದಾಹರಣೆಗೆ "@asha_k4821". ನೀವು ನೋಂದಣಿ ಮಾಡಿದಾಗಲೇ ನಾವು ನಿಮಗೆ ಒಂದು ಬಳಕೆದಾರ ಹೆಸರು ರಚಿಸಿದ್ದೇವೆ. ಅದನ್ನು ಬದಲಿಸಲು Settings ತೆರೆದು, Username (ಬಳಕೆದಾರ ಹೆಸರು) ಪಕ್ಕದ Edit ಒತ್ತಿ. ಆ್ಯಪ್‌ನಲ್ಲಿ Username ಒತ್ತಿ.

  • ಅದರಲ್ಲಿ ಕನಿಷ್ಠ 3, ಗರಿಷ್ಠ 20 ಅಕ್ಷರಗಳು ಇರಬೇಕು.
  • a-ಯಿಂದ z-ವರೆಗಿನ ಇಂಗ್ಲಿಷ್ ಸಣ್ಣಕ್ಷರಗಳು, ಅಂಕಿಗಳು ಮತ್ತು ಅಂಡರ್‌ಸ್ಕೋರ್ (_) ಬಳಸಿ.
  • ಅದನ್ನು ಬೇರೆ ಯಾರೂ ಈಗಾಗಲೇ ತೆಗೆದುಕೊಂಡಿರಬಾರದು. ಅದರಲ್ಲಿ "Sagazo" ಅಥವಾ "Proper Eleven" ಇರಬಾರದು.

ನಿಮ್ಮ ಪ್ರೊಫೈಲ್‌ನ ವಿಳಾಸದಲ್ಲಿ ನಿಮ್ಮ ಬಳಕೆದಾರ ಹೆಸರು ಇರುತ್ತದೆ, sagazo.com/profile/asha_k4821 ಎಂಬಂತೆ. ಬಳಕೆದಾರ ಹೆಸರು ಬದಲಿಸಿದ ನಂತರ, ಹಳೆಯ ಹೆಸರಿರುವ ಹಳೆಯ ಲಿಂಕ್‌ಗಳು ಕೆಲಸ ಮಾಡುವುದಿಲ್ಲ. ಹಾಗಾಗಿ ಹೊಸ ಲಿಂಕ್ ಹಂಚಿಕೊಳ್ಳಿ.

ನಿಮ್ಮ ಫೋನ್ ಸಂಖ್ಯೆಯನ್ನು Settings ಪುಟದಲ್ಲಿ ಬದಲಿಸಲು ಸಾಧ್ಯವಿಲ್ಲ. ನಿಮ್ಮ ಫೋನ್ ಸಂಖ್ಯೆ ಬದಲಿಸುವುದು ಹೇಗೆ ಎಂಬುದನ್ನು ನೋಡಿ.

ಇನ್ನೂ ಪರಿಹಾರ ಸಿಗಲಿಲ್ಲವೇ?

ನಮಗೆ ಸಂದೇಶ ಕಳುಹಿಸಿ, ಒಬ್ಬ ವ್ಯಕ್ತಿ ಉತ್ತರಿಸುತ್ತಾರೆ

ಏನಾಯಿತು ಎಂದು ತಿಳಿಸಿ, ಲಿಂಕ್‌ಗಳಿದ್ದರೆ ಸೇರಿಸಿ. ಆಗ ಉತ್ತರಿಸುವ ಮೊದಲು ನಾವು ನೋಡಬಹುದು. ನಿಮ್ಮ ಖಾಸಗಿ ಕ್ಷಣಗಳ ಫೋಟೋದಂತಹ ತುರ್ತು ವಿಷಯವಾದರೆ, ಸುರಕ್ಷತಾ ಫಾರ್ಮ್ ಬಳಸಿ.

ನಮಗೆ ಸಂದೇಶ ಕಳುಹಿಸಿ

ಮತ್ತೆ ಸಂಪರ್ಕಿಸಲಾಗುತ್ತಿದೆ…

ಸ್ವಲ್ಪ ಹೊತ್ತಿನಲ್ಲೇ ಹಿಂತಿರುಗುತ್ತೇವೆ.