ನೇರವಾಗಿ ಮುಖ್ಯ ಭಾಗಕ್ಕೆ ಹೋಗಿ

ನನ್ನ ಪಾಸ್‌ವರ್ಡ್ ಮರೆತುಹೋಗಿದೆ

ಕೊನೆಯ ಅಪ್‌ಡೇಟ್:

ನಿಮಗೆ ರೀಸೆಟ್ ಲಿಂಕ್ ಬೇಕಿಲ್ಲ. ಬದಲಿಗೆ ಒಂದು ಬಾರಿಯ ಕೋಡ್ ಬಳಸಿ ಲಾಗ್ ಇನ್ ಮಾಡಿ. ನಂತರ Settings (ಸೆಟ್ಟಿಂಗ್‌ಗಳು) ಪುಟದಲ್ಲಿ ಹೊಸ ಪಾಸ್‌ವರ್ಡ್ ಹೊಂದಿಸಿ. ಅದಕ್ಕೆ ನಿಮ್ಮ ಹಳೆಯ ಪಾಸ್‌ವರ್ಡ್ ಬೇಕಿಲ್ಲ.

ಕೋಡ್ ಬಳಸಿ ಲಾಗ್ ಇನ್ ಮಾಡಿ

  1. ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿ, Continue (ಮುಂದುವರಿಸಿ) ಒತ್ತಿ.
  2. ಪಾಸ್‌ವರ್ಡ್ ಹಂತದಲ್ಲಿ Log in with OTP instead (ಪಾಸ್‌ವರ್ಡ್ ಬದಲು OTP ಮೂಲಕ ಲಾಗ್ ಇನ್ ಮಾಡಿ) ಒತ್ತಿ.
  3. ನಾವು SMS ಮೂಲಕ ಕಳುಹಿಸುವ 6 ಅಂಕಿಯ ಕೋಡ್ ಟೈಪ್ ಮಾಡಿ.

ಕೋಡ್ ಬಳಸಿ ಲಾಗ್ ಇನ್ ಮಾಡಿದರೆ ನಿಮ್ಮ ಪಾಸ್‌ವರ್ಡ್ ಎಂದಿಗೂ ಬದಲಾಗುವುದಿಲ್ಲ, ಅಳಿಸಿಯೂ ಹೋಗುವುದಿಲ್ಲ. ಹಾಗಾಗಿ ಹಳೆಯ ಪಾಸ್‌ವರ್ಡ್ ನಂತರ ನೆನಪಾದರೆ, ಅದು ಇನ್ನೂ ಕೆಲಸ ಮಾಡುತ್ತದೆ.

ಹೊಸ ಪಾಸ್‌ವರ್ಡ್ ಹೊಂದಿಸಿ

ವೆಬ್‌ಸೈಟ್‌ನಲ್ಲಿ ನಿಮ್ಮ ಪ್ರೊಫೈಲ್ ತೆರೆಯಿರಿ (ಮೆನುವಿನಲ್ಲಿರುವ ನಿಮ್ಮ ಹೆಸರು). Settings ಒತ್ತಿ, ನಂತರ Privacy (ಗೌಪ್ಯತೆ) ಟ್ಯಾಬ್ ತೆರೆಯಿರಿ. Password (ಪಾಸ್‌ವರ್ಡ್) ಪಕ್ಕದಲ್ಲಿರುವ Change (ಬದಲಿಸಿ) ಒತ್ತಿ. ಹೊಸ ಪಾಸ್‌ವರ್ಡ್ ಅನ್ನು ಎರಡು ಬಾರಿ ಟೈಪ್ ಮಾಡಿ, Update password (ಪಾಸ್‌ವರ್ಡ್ ಬದಲಿಸಿ) ಒತ್ತಿ.

ಆ್ಯಪ್‌ನಲ್ಲಿ, ಮೆನುವಿನಿಂದ ಅಥವಾ ನಿಮ್ಮ ಪ್ರೊಫೈಲ್‌ನಲ್ಲಿರುವ ಗೇರ್ ಐಕಾನ್‌ನಿಂದ Settings ತೆರೆಯಿರಿ. ನಂತರ Privacy ಅಡಿಯಲ್ಲಿರುವ Password ಒತ್ತಿ.

ಪಾಸ್‌ವರ್ಡ್ ನಿಯಮ

  • ಕನಿಷ್ಠ 8 ಅಕ್ಷರಗಳು
  • ಒಂದು ಇಂಗ್ಲಿಷ್ ದೊಡ್ಡಕ್ಷರ, A-ಯಿಂದ Z-ವರೆಗೆ
  • ಒಂದು ಅಂಕಿ, 0ಯಿಂದ 9ರವರೆಗೆ

ಎರಡೂ ಬಾಕ್ಸ್‌ಗಳಲ್ಲಿ ಒಂದೇ ಪಾಸ್‌ವರ್ಡ್ ಇರಬೇಕು. ಬೇರೆ ಎಲ್ಲೂ ಬಳಸದ ಪಾಸ್‌ವರ್ಡ್ ಆರಿಸಿ. ಮುಖ್ಯವಾಗಿ, ನಿಮ್ಮ ಇಮೇಲ್‌ಗೆ ಅಥವಾ ಬ್ಯಾಂಕ್‌ಗೆ ಬಳಸುವ ಪಾಸ್‌ವರ್ಡ್ ಅನ್ನು ಇಲ್ಲಿ ಬಳಸಬೇಡಿ.

ಇನ್ನೂ ಪರಿಹಾರ ಸಿಗಲಿಲ್ಲವೇ?

ನಮಗೆ ಸಂದೇಶ ಕಳುಹಿಸಿ, ಒಬ್ಬ ವ್ಯಕ್ತಿ ಉತ್ತರಿಸುತ್ತಾರೆ

ಏನಾಯಿತು ಎಂದು ತಿಳಿಸಿ, ಲಿಂಕ್‌ಗಳಿದ್ದರೆ ಸೇರಿಸಿ. ಆಗ ಉತ್ತರಿಸುವ ಮೊದಲು ನಾವು ನೋಡಬಹುದು. ನಿಮ್ಮ ಖಾಸಗಿ ಕ್ಷಣಗಳ ಫೋಟೋದಂತಹ ತುರ್ತು ವಿಷಯವಾದರೆ, ಸುರಕ್ಷತಾ ಫಾರ್ಮ್ ಬಳಸಿ.

ನಮಗೆ ಸಂದೇಶ ಕಳುಹಿಸಿ

ಮತ್ತೆ ಸಂಪರ್ಕಿಸಲಾಗುತ್ತಿದೆ…

ಸ್ವಲ್ಪ ಹೊತ್ತಿನಲ್ಲೇ ಹಿಂತಿರುಗುತ್ತೇವೆ.