ನೇರವಾಗಿ ಮುಖ್ಯ ಭಾಗಕ್ಕೆ ಹೋಗಿ

ನಿಮ್ಮ ಪ್ರೊಫೈಲ್ ಅನ್ನು ಖಾಸಗಿ ಮಾಡುವುದು ಹೇಗೆ

ಕೊನೆಯ ಅಪ್‌ಡೇಟ್:

Settings (ಸೆಟ್ಟಿಂಗ್‌ಗಳು) ಪುಟದಲ್ಲಿ Public Profile (ಸಾರ್ವಜನಿಕ ಪ್ರೊಫೈಲ್) ಆಫ್ ಮಾಡಿದರೆ, ನಿಮ್ಮ ಪ್ರೊಫೈಲ್ ಪುಟವನ್ನು ನೀವು ಮಾತ್ರ ತೆರೆಯಬಹುದು. ನಿಮ್ಮ ಸ್ನೇಹಿತರೂ ಸೇರಿ ಉಳಿದ ಎಲ್ಲರಿಗೂ, ಆ ಪುಟ ಇಲ್ಲ ಎಂದು ಹೇಳುವ ಒಂದು ಪುಟ ಕಾಣುತ್ತದೆ.

ಇದನ್ನು ಆನ್ ಅಥವಾ ಆಫ್ ಮಾಡುವುದು

  • ವೆಬ್‌ಸೈಟ್‌ನಲ್ಲಿ: Settings ತೆರೆಯಿರಿ, ನಂತರ Privacy (ಗೌಪ್ಯತೆ) ಟ್ಯಾಬ್ ತೆರೆಯಿರಿ. ಅಲ್ಲಿ Public Profile ಆಫ್ ಮಾಡಿ. ಅದರ ಕೆಳಗಿನ ಸಾಲು "Only you can see your profile" (ನಿಮ್ಮ ಪ್ರೊಫೈಲ್ ಅನ್ನು ನೀವು ಮಾತ್ರ ನೋಡಬಹುದು) ಎಂದು ಬದಲಾಗುತ್ತದೆ.
  • ಆ್ಯಪ್‌ನಲ್ಲಿ: Settings ತೆರೆಯಿರಿ, Privacy ಅಡಿಯಲ್ಲಿರುವ Public Profile ಆಫ್ ಮಾಡಿ.

Settings ಪುಟದ Privacy ಟ್ಯಾಬ್‌ನಲ್ಲಿ Public Profile ಸ್ವಿಚ್, Download My Data ಮತ್ತು Danger Zone ಅಡಿಯಲ್ಲಿ Delete My Account ಕಾಣುತ್ತವೆ.

ಯಾವಾಗ ಬೇಕಾದರೂ ಅದನ್ನು ಮತ್ತೆ ಆನ್ ಮಾಡಬಹುದು. ಅದು ಆಫ್ ಆಗಿರುವಾಗ ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ.

ಬೇರೆಯವರಿಗೆ ಇನ್ನೂ ಏನೆಲ್ಲ ಕಾಣುತ್ತದೆ

ಖಾಸಗಿ ಪ್ರೊಫೈಲ್ ನಿಮ್ಮ ಪುಟವನ್ನು ಮಾತ್ರ ಮರೆಮಾಡುತ್ತದೆ. Sagazo-ದಲ್ಲಿ ನೀವು ಮಾಡುವ ಎಲ್ಲವನ್ನೂ ಅದು ಮರೆಮಾಡುವುದಿಲ್ಲ.

  • ನಿಮ್ಮ ಪೋಸ್ಟ್‌ಗಳಿಗೆ ಅವುಗಳದೇ ಸೆಟ್ಟಿಂಗ್ ಇರುತ್ತದೆ. ಸಾರ್ವಜನಿಕ ಪೋಸ್ಟ್ ನಿಮ್ಮ ಹೆಸರಿನೊಂದಿಗೆ Discover (ಡಿಸ್ಕವರ್), Following (ಫಾಲೋಯಿಂಗ್) ಮತ್ತು ಸರ್ಕಲ್‌ಗಳಲ್ಲಿ ಕಾಣುತ್ತಲೇ ಇರುತ್ತದೆ. ನಿಮ್ಮ ಹೆಸರು ಒತ್ತಿದರೆ, ಇಲ್ಲ ಎಂದು ಹೇಳುವ ಆ ಪುಟವೇ ತೆರೆಯುತ್ತದೆ.
  • ನಿಮ್ಮ ಕಾಮೆಂಟ್‌ಗಳು, ಸರ್ಕಲ್‌ನ ಸದಸ್ಯರ ಪಟ್ಟಿಯಲ್ಲಿರುವ ನಿಮ್ಮ ಹೆಸರು ಮತ್ತು ನೀವಿರುವ ಚಾಟ್‌ಗಳಲ್ಲಿನ ನಿಮ್ಮ ಸಂದೇಶಗಳು ಕೂಡ ಕಾಣುತ್ತವೆ.

ಹುಡುಕಾಟದಲ್ಲಿ ನೀವು ಸಿಗುವುದಿಲ್ಲ. ಯಾರನ್ನಾದರೂ ಉಲ್ಲೇಖಿಸಲು ಯಾರಾದರೂ @ ಟೈಪ್ ಮಾಡಿದಾಗಲೂ ನಿಮ್ಮ ಹೆಸರು ಬರುವುದಿಲ್ಲ. ಆದರೆ ನಿಮ್ಮ ಸ್ನೇಹಿತರು ಹೊಸ ಚಾಟ್ ಶುರು ಮಾಡುವಾಗ ನಿಮ್ಮನ್ನು ಹುಡುಕಬಹುದು.

ಒಂದು ಪೋಸ್ಟ್ ಅನ್ನು ನಿಮಗೆ ಮಾತ್ರ ಇಟ್ಟುಕೊಳ್ಳುವುದು

ಅದು ಬೇರೆಯೇ ಆಯ್ಕೆ. ಪ್ರತಿ ಪೋಸ್ಟ್‌ಗೂ ನೀವು ಅದನ್ನು ಬೇರೆಯಾಗಿ ಆರಿಸುತ್ತೀರಿ. ನೀವು ಪೋಸ್ಟ್ ಬರೆಯುವಾಗ, ಅದರಲ್ಲಿ Public (ಸಾರ್ವಜನಿಕ) ಅಥವಾ Only me (ನಾನು ಮಾತ್ರ) ಎಂದು ತೋರಿಸುವ ಒಂದು ಸ್ವಿಚ್ ಇರುತ್ತದೆ. Only me ಎಂದು ಇಟ್ಟ ಪೋಸ್ಟ್ ನಿಮ್ಮದು ಮಾತ್ರ. ಅದರ ಲಿಂಕ್ ಇದ್ದರೂ ಬೇರೆ ಯಾರೂ ಅದನ್ನು ತೆರೆಯಲು ಸಾಧ್ಯವಿಲ್ಲ.

ಇನ್ನೂ ಪರಿಹಾರ ಸಿಗಲಿಲ್ಲವೇ?

ನಮಗೆ ಸಂದೇಶ ಕಳುಹಿಸಿ, ಒಬ್ಬ ವ್ಯಕ್ತಿ ಉತ್ತರಿಸುತ್ತಾರೆ

ಏನಾಯಿತು ಎಂದು ತಿಳಿಸಿ, ಲಿಂಕ್‌ಗಳಿದ್ದರೆ ಸೇರಿಸಿ. ಆಗ ಉತ್ತರಿಸುವ ಮೊದಲು ನಾವು ನೋಡಬಹುದು. ನಿಮ್ಮ ಖಾಸಗಿ ಕ್ಷಣಗಳ ಫೋಟೋದಂತಹ ತುರ್ತು ವಿಷಯವಾದರೆ, ಸುರಕ್ಷತಾ ಫಾರ್ಮ್ ಬಳಸಿ.

ನಮಗೆ ಸಂದೇಶ ಕಳುಹಿಸಿ

ಮತ್ತೆ ಸಂಪರ್ಕಿಸಲಾಗುತ್ತಿದೆ…

ಸ್ವಲ್ಪ ಹೊತ್ತಿನಲ್ಲೇ ಹಿಂತಿರುಗುತ್ತೇವೆ.