ನಾವು SMS ಮೂಲಕ ಕಳುಹಿಸುವ ಕೋಡ್ ನಿಮ್ಮ ಖಾತೆಯ ಕೀಲಿಕೈ. ಅದು ಯಾರ ಬಳಿ ಇದೆಯೋ, ಅವರು ನಿಮ್ಮ ಹೆಸರಿನಲ್ಲಿ ಲಾಗ್ ಇನ್ ಮಾಡಬಹುದು. ಹಾಗಾಗಿ ಯಾರೇ ಕೇಳಿದರೂ ಅದನ್ನು ಎಂದಿಗೂ ಹಂಚಿಕೊಳ್ಳಬೇಡಿ. ಕರೆಯಲ್ಲಾಗಲೀ, ವಾಟ್ಸ್‌ಆ್ಯಪ್‌ನಲ್ಲಾಗಲೀ, Sagazo-ದ ಚಾಟ್‌ನಲ್ಲಾಗಲೀ Sagazo ಅದನ್ನು ಎಂದಿಗೂ ಕೇಳುವುದಿಲ್ಲ.

ಇವುಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ
ನಿಮ್ಮ ಲಾಗ್ ಇನ್ ಕೋಡ್, ಪಾಸ್‌ವರ್ಡ್, UPI PIN ಅಥವಾ ಕಾರ್ಡ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಇವುಗಳಲ್ಲಿ ಯಾವುದನ್ನೂ Sagazo ಕೇಳುವುದಿಲ್ಲ. ಇವನ್ನು ಕೇಳುವವರು ನಿಮ್ಮ ಖಾತೆಗೆ ಅಥವಾ ಬ್ಯಾಂಕ್ ಖಾತೆಗೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ವರದಿ ಮಾಡಿ. ಯಾವುದರ ಬಗ್ಗೆಯಾದರೂ ವರದಿ ಮಾಡುವುದು ಹೇಗೆ ಎಂಬುದನ್ನು ನೋಡಿ.
ಒಳ್ಳೆಯ ಪಾಸ್‌ವರ್ಡ್ ಆರಿಸಿ
ಕನಿಷ್ಠ 8 ಅಕ್ಷರಗಳನ್ನು ಬಳಸಿ. ಅದರಲ್ಲಿ ಒಂದು ಇಂಗ್ಲಿಷ್ ದೊಡ್ಡಕ್ಷರ ಮತ್ತು ಒಂದು ಅಂಕಿ ಇರಲಿ. ಬೇರೆ ಎಲ್ಲಾದರೂ ಬಳಸುವ ಪಾಸ್‌ವರ್ಡ್ ಅನ್ನು ಇಲ್ಲಿ ಬಳಸಬೇಡಿ. ಅಡ್ಡಾದಿಡ್ಡಿ ಅಕ್ಷರಗಳಿಗಿಂತ, ನಿಮಗೆ ಮಾತ್ರ ಹೊಳೆಯುವ ಒಂದು ಚಿಕ್ಕ ವಾಕ್ಯ ನೆನಪಿಡಲು ಸುಲಭ.
ಬೇರೆಯವರೂ ಬಳಸುವ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಲಾಗ್ ಔಟ್ ಮಾಡಿ
- ವೆಬ್‌ಸೈಟ್‌ನಲ್ಲಿ: ಮೆನುವಿನ ಕೊನೆಯಲ್ಲಿರುವ Log out (ಲಾಗ್ ಔಟ್ ಮಾಡಿ) ಒತ್ತಿ.
- ಆ್ಯಪ್‌ನಲ್ಲಿ: ಮೆನುವಿನಲ್ಲಿರುವ Log out ಒತ್ತಿ. ಅಥವಾ Settings (ಸೆಟ್ಟಿಂಗ್‌ಗಳು) ಪುಟದ ಕೊನೆಯಲ್ಲಿರುವ Log out ಒತ್ತಿ.
ಒಂದು ಬ್ರೌಸರ್‌ನಲ್ಲಿ ಲಾಗ್ ಔಟ್ ಮಾಡಿದರೆ, ಅದರಲ್ಲಿ Sagazo ನೋಟಿಫಿಕೇಶನ್‌ಗಳೂ ಆಫ್ ಆಗುತ್ತವೆ.
Sagazo ನಿಮ್ಮ ಖಾತೆಯನ್ನು ಹೇಗೆ ಕಾಪಾಡುತ್ತದೆ
- ಒಂದು ಕೋಡ್ 10 ನಿಮಿಷಗಳವರೆಗೆ ಕೆಲಸ ಮಾಡುತ್ತದೆ. 5 ಬಾರಿ ತಪ್ಪಾಗಿ ಟೈಪ್ ಮಾಡಿದ ನಂತರ ಅದು ಕೆಲಸ ಮಾಡುವುದಿಲ್ಲ.
- ಒಂದು ಸಂಖ್ಯೆಗೆ ಒಂದು ಗಂಟೆಯಲ್ಲಿ 5 ಕೋಡ್‌ಗಳನ್ನು ಮಾತ್ರ ಕಳುಹಿಸಬಹುದು.
- ತುಂಬಾ ಬಾರಿ ತಪ್ಪು ಪಾಸ್‌ವರ್ಡ್ ಟೈಪ್ ಮಾಡಿದರೆ, ಮತ್ತೆ ಪ್ರಯತ್ನಿಸುವ ಮೊದಲು ಕಾಯಬೇಕಾಗುತ್ತದೆ.
- ಪಾಸ್‌ವರ್ಡ್‌ಗಳು ಮತ್ತು ಕೋಡ್‌ಗಳನ್ನು ನಾವು ಓದಲಾಗದ ರೂಪಕ್ಕೆ ಬದಲಿಸಿಯೇ ಉಳಿಸುತ್ತೇವೆ. ಹಾಗಾಗಿ ನಮ್ಮ ತಂಡಕ್ಕೂ ಅವುಗಳನ್ನು ಓದಲು ಸಾಧ್ಯವಿಲ್ಲ.
ಬೇರೆ ಯಾರೋ ಲಾಗ್ ಇನ್ ಆಗಿದ್ದಾರೆ ಎನಿಸಿದರೆ
ತಕ್ಷಣ ನಿಮ್ಮ ಪಾಸ್‌ವರ್ಡ್ ಬದಲಿಸಿ. ಎಲ್ಲಿ ಬದಲಿಸಬೇಕು ಎಂದು ನನ್ನ ಪಾಸ್‌ವರ್ಡ್ ಮರೆತುಹೋಗಿದೆ ಪುಟ ತಿಳಿಸುತ್ತದೆ. ನಂತರ Sagazo ಸಪೋರ್ಟ್ ತಂಡಕ್ಕೆ ಬರೆಯಿರಿ. ಪ್ರತಿ ಫೋನ್ ಮತ್ತು ಕಂಪ್ಯೂಟರ್‌ನಲ್ಲಿ ನಿಮ್ಮ ಖಾತೆಯನ್ನು ನಾವು ಲಾಗ್ ಔಟ್ ಮಾಡಬಹುದು. Sagazo-ಗೆ ಲಾಗ್ ಇನ್ ಆಗಿರುವ ಫೋನ್ ಕಳೆದುಹೋದರೂ ಇದನ್ನೇ ಮಾಡಿ.